Friday 25 September 2015

Weekend Satire: stri stri stri Swamijiis

Radio collar for Swamijis

ನಮ್ಮ ನಾಡಿನಲ್ಲಿ ಸ್ತ್ರೀ , ಸ್ತ್ರೀ ಸ್ತ್ರೀ ಸ್ವಾಮೀಜಿ ಗಳ ಸಂಖ್ಯೆ ಹುಲಿ ಸಂಖ್ಯೆಯಂತೆ growing trend ತೋರುತ್ತಿರುವದು,  ಒಂದು ದಿನ ಕುಸಿಯುವ ಮತ್ತೊಂದು ದಿನ ಏರುವ SENSEX ಮೇಲಾಣೆ ನಿಜವಾದ ವಿಚಾರ. national ಸ್ವಾಮೀಜಿ ಗಳು ಕೃಷ್ಣ -ಜನ್ಮಸ್ಥಾನ ಕ್ಕೆ ಟಿಕೆಟ್ ಪಡೆದಂತೆ, ಕೆಲವು ವರ್ಷಗಳ ಕೆಳಗೆ ಎವರ್ -ಹಲ್ಲು -ಕಿಸ್ಸಕ-ಸ್ವಾಮಿ ನಿತ್ಯ-happy-swamy, ಕೃಷ್ಣ-ಜನ್ಮಸ್ಥಾನದ  'ಪ್ರಸಾದ' ಸ್ವೀಕರಿಸಿ ಬಂದಿರುವಂತೆ, ಈಗ ವೇದ ಘೋಷ ಮಾಡುತ್ತಿರುವ , selfie 'Calf -Cattle -Saviour' ಸ್ವಾಮಿ ಇಂದು ಸ್ತ್ರೀ-ಸ್ತ್ರೀ-ಸ್ತ್ರೀ ಸಂಗ ಮಾಡಿ ಕೃಷ್ಣ ನ  ಜನ್ಮಸ್ಥಾನಕ್ಕೆ , 'TICKET ' aka charge sheet, ಪಡೆದು ಧನ್ಯ ರಾಗುವ ಸುಯೋಗ ಒದಗಿ ಬಂದಿದೆ.ಇಂತಹ  ಇಂತಹ ಸ್ತ್ರೀ, ಸ್ತ್ರೀ, ಸ್ತ್ರೀ ಸ್ವಾಮಿಗಳ ಪಾದುಂಗಳಿಗೆ, ರೇಡಿಯೋ -collar ತೊಡಿಸಿದರೆ ಅವರುಗಳ ಆಶ್ರಮದಲ್ಲಿ ಅಲ್ಲ ಕ್ಷಮಿಸಿ ಸಾಮ್ರಾಜ್ಯದಲ್ಲಿ (ಇದು ಸ್ವಾಮಿಗಳೇ ಕೊಟ್ಟಿರುವ terminology!) ಅಂತಪುರದಲ್ಲಿ ತಪ್ಪಸ್ಸಿನ ಮಧ್ಯೆ ಯಾವ ಯಾವ ಮೇನಕೆಯರ ಕಾಟ ಅನುಭವಿಸುತ್ತಾರೆ ತಿಳ್ಯಬಹುದು. ನಮ್ಮ ೧೦೦ ಸಂಖ್ಯೆ ಉಳ್ಳ ಇಲಾಖೆ ಸಹ Chain -Snatchers ಕಡೆ ಗಮನ ಕೊಡಬಹುದು . ನಮ್ಮ calf -loving but women cell hating ಸ್ತ್ರೀ ಸ್ತ್ರೀ ಸ್ತ್ರಿಗಳು ಹೇಳಿರುವಂತೆ ಅವರ ವಿರುದ್ಧ ಮಾತನಾಡುವವರ ಜಾತಿ ಸರಿ ಇಲ್ವಂತೆ, ಅವರ ಸಾಮರಾಜ್ಯ ಕೋಲ್ಕತ್ತಾ ದಲ್ಲಿ , ಬಿಹಾರದಲ್ಲಿ ಹೆಚ್ಚು ಬಲ ಶಾಲಿಯಂತೆ , ಕರ್ನಾಟಕ ದಲ್ಲಿ ಯಾಕೋ ಸಪ್ಪೆಯಂತೆ , ಅವರನ್ನು ಅವರ ಶಿಷ್ಯರು ಕಾಪಾಡಿದರೆ ಇವರು ಒಂದು ಪುಟ್ಟ ಹಸುಳೆಯನ್ನು ಸಹ ಕಾಪಡುತ್ತಾರೆ ಅಂತೆ. ಇವರು ಬೀದಿ -ಬಸವ ಗಳಿಗೆ ಉತ್ತರ ಕೊಡ್ಲ್ವಂತೆ, ಏನಿದ್ರೂ ಸಾಕಿದ  ಹಸುಗಳಿಗೆ ಮಾತ್ರ ಉತ್ತರ ಕೊಡುತ್ತಾರಂತೆ . ಜೈ ಸ್ವಾಮೀಜಿ,  for  doing GENDER BIAS among cattle herd too ಅಂತ ಇಂಗ್ಲೀಷ್ ಮಾಧ್ಯಮದವರು ಗೊಣಗುತ್ತಿದ್ದು ನಮ್ಮ ಸಸು reporter ಕಿವಿಗೂ ಬಿತ್ತಂತೆ.read more

ಮತ್ತೊಂದು ಕಡೆ ಕಲ್ಬುರ್ಗಿ ಅವರ ಜೀವ ಬಲಿ ಪಡೆದ ಮಂದಿ ಯಾಕೋ ಪಾಪ ಭಾಗವನ್ ಎಂಬ  ಸಾಹಿತಿ ಗಳು 'ಸೈತಾನ್ ' ಅಂತ ಹೆಸರು ಬದಲ್ಸಿ ಕೊಳ್ಳಲಿ ಅಂತಾ ಕೂಗುತ್ತಿರುವುದು , ಈ ದೇಶದಾಗೆ ಮುಗಿದು ಹೋದ ವಿಚಾರಗಳನ್ನು ಮತ್ತೆ ತಿದ್ದುವ NURSERY ಘರ್ ವಾಪಸಿ ಕ್ಲಾಸ್ ಶುರು ಆಗಿರುವುದು ಖಾತ್ರಿ ಆಗಿದೆ ಅಂತ ನಮ್ಮ ಸಸು ರಿಪೋರ್ಟರ್ ವರದಿ ಮಾಡಿದ್ದಾರೆ. 

ಹಸು ಇಷ್ಟ ಆದ್ರೆ ಬೀದಿ ಬಸವ ಕಷ್ಟ

POT -HOLES & Baptism  

 

The problem of residents of IT-BT localities is unique you see , the kingly -ring road gets moksha aka baptism from POT-HOLES closing magic wand, but the service roads and ಅಡ್ದ ರಸ್ತೆ  are not lucky to  be baptized! So residents of bengaluru should welcome ramalinga reddy ಗಾರು to their residents for cup of beverage , so that POT -holes baptism happens in quick pace.  read more

  ಕನ್ನಡಾಂಬೆ ನಾಡಿನ ಜಲದ ಬಗ್ಗೆ ಕಾಳಜಿ ಉಳ್ಳ ನಾಡ ದೇವಿ ಮಕ್ಕಳು ತಮ್ಮ ತಮ್ಮ identity ತೊರೆದು, ಬೀದಿಗೆ ಇಳಿದು  ಪ್ರತಿಭಟಿಸಿದ್ದು ಆಯಿತು. ಇದರ ಮಧ್ಯೆ ಕಪ್ಪು ಚುಕ್ಕೆ ಎಂಬಂತೆ , ಕರಾವಳಿ ಭಾಗದಲ್ಲಿ, ನೀರಸ ಪ್ರತಿಕ್ರಿಯೆ ಅಂತೆ. ಅಲ್ಲ ಮಾರಾಯರೇ ಯಾವುದೊ ದೇವರು-ಧರ್ಮದ ಹೆಸರಿನಲ್ಲಿ ಹೆಸರಿನಲ್ಲಿ, ಗಲಭೆಗೆ ಪ್ರೋತ್ಸಾಹ ನೀಡುವ ಮಂದಿ , ತಮ್ಮ ಕುಡಿಯುವ ನೀರಿನ ೭೫ ದಿನಗಳ ಹೋರಾಟಕ್ಕೆ, ರೈತಾಪಿ ಮಂದಿ ಮಾಡಿದ ಹೋರಾಟಕ್ಕೆ ಒಂದು ಸಾಂಕೇತಿಕ ಬೆಂಬಲ ನೀಡಲಾಗದ ಮನಸ್ಥಿತಿ ಯಾರಿಗೂ ಬಾರದಿರಲಿ ಮಾರಾಯ್ರೆ . ಎಲ್ಲ ಮಂದಿ ನಾವಾಯಿತು ನಮ್ಮ ಹೆಂಡರು ಮಕ್ಕಳು ಆಯಿತು ಅಂತ ಬುದ್ಧಿ-ಜೀವಿಗಳಾಗಿ ಬಿಟ್ಟರೆ ಹೇಗೆ ಮಾರಾಯರೇ! ಮೇಕೆ ದಾಟು , ಕಾವೇರಿ, ಕೃಷ್ಣ ಈಗ ಮಹದಯೀ ಯಾವುದೇ ವಿಚಾರದಲ್ಲೂ ಒಂದೇ ರೀತಿ ಸ್ಪಂದಿಸುವ ಹಳೆ-ಮೈಸೂರ್ ಭಾಗದ ಸ್ಪಂದನ ಎಲ್ಲರಿಗು ಮಾದ್ರಿ ಈ  ಒಳ್ಳೇದು ಕಣ್ಲೇ , ವಸಿ ಪಸಿ , ಐತೆ ಪೈತೆ ಭಾಷೆ ಮಾತಡುವ ಹೈಕಳು , ಒಂದೇ ನಾಡು ಒಂದೇ ಭಾಷೆ ಅನ್ನೋ ಭಾವನೆ ಹೊಂದಿದ್ರು


ಸಹ, ನೀವು ಅವರನ್ನು 'ಹೊಟ್ಟೆ ತುಂಬಿದವರು' ಅನ್ನೋದನ್ನು ಬಿಟ್ಟು, ಬೇರೆ ಭಾಗದಲ್ಲೂ ಅರ್ಥೈಸಿಕೊಂಡರೆ ಅಖಂಡ ಕರ್ನಾಟಕದ ಜೀವಾಳ 'ಕಾವೇರಿ', 'ನೇತ್ರಾವತಿ', 'ಶರಾವತಿ', 'ಕೃಷ್ಣ' ಅನ್ನೋದು ಮನದಟ್ಟು ಆಗುತ್ತದೆ,



ಇಲ್ಲದಿದ್ದರೆ ನಮ್ಮಲ್ಲೂ -ಸ್ವ-ಹಿತಾಸಕ್ತಿ ಉಳ್ಳ  
ಕೆಲವು  ಪುಡಾರಿಗಳು ತಾವು ಮಂತ್ರಿ, ಮುಖ್ಯ ಮಂತ್ರಿ  ಅಧಿಕಾರ ಅನುಭವಿಸಬೇಕು ಅನ್ನೋ ಕಾರಣಕ್ಕೆ ನಮ್ಮಲ್ಲೂ ತೆಲಂಗಾಣ ದ ಬೀಜ  ಬಿತ್ತುತ್ತಾರೆ ಅಷ್ಟೇ. ನಮ್ಮಲ್ಲಿ ಸಾವಿರಾರು ದೇವರು ದಿಂಡರು, ಧರ್ಮ ಆಚರಣೆ ಇವೆ ನಿಜ ಆದರೆ ಕೊಡವ, ತುಳು,ಕೊಂಕಣಿ,ಮೈಸೂರ್ ಕನ್ನಡ ಹುಬ್ಬಳ್ಳಿ ಕನ್ನಡ ಎಲ್ಲಕ್ಕೂ ಲಿಪಿ ನಮ್ಮ ಸುಂದರ ಅ , ಆ , ಇ ಈ ನೆ ತಾನೇ ಗೆಳಯರೇ. ಧರ್ಮ ಜನರನ್ನು ಒಡೆಯುತ್ತದೆ , ಭಾಷೆ ನಮ್ಮನ್ನು ಒಂದುಗೂಡಿಸುತ್ತದೆ. ನಿಮಗೆ  ನಾನು Fanatic ರೀತಿ ಅಥವಾ  Regionalism ಪ್ರತಿಪಾದಕನಾಗಿ ಕಂಡರೂ ಸರಿಯೇ . ಏಕಂದರೆ ಭಾರತ ಭಾಷೆಗಳ ಒಂದು ಒಕ್ಕೂಟ ಅನ್ನೋದನ್ನು ಮರೆಯದಿರೋಣ. ಜೈ ಕರ್ನಾಟಕ ಮಾತೆ      
   

No comments: