Tuesday, 8 November 2016

Chatrapathi Shivaji Supporters Vs Tippu Sultan Supporters & Kannadigas Apathy

ಇಂದಿನ ಪತ್ರಿಕೆಯಲ್ಲಿ ಎರಡು ಸುದ್ಧಿ ಗಳು ನನ್ನ ಗಮನ ಸೆಳೆದೆವು.
Kannada School Targeted by Maharastra Ekikarana Samithi Hooligans
  1. ಟಿಪ್ಪು ಜಯಂತಿ ವಿರೋಧಿಸಿ 'ಹರ ಹರ ಮಹದೇವ್ ' ಭಕ್ತರ aka ಶಿವ ಸೇನೆ ದೋಸ್ತ್ ಗಳಿಂದ ಕನ್ನಡ ವಿರೋಧಿ ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ Protest Against Tippu anniverasary
  2. ಮತ್ತೊಂದು ಬೆಳಗಾವಿ ಜಿಲ್ಲೆ ಯಲ್ಲಿನ ಕನ್ನಡ ಶಾಲೆಗೆ ಬೆಂಕಿ ಇಟ್ಟ 'ಹರ ಹರಾ ಮಹದೇವ್' ಎಂಬ ಕನ್ನಡ ವಿರೋಧಿಗಳು Kannada school Demolished in Belgaum 
ಗೆಳೆಯರೇ , ನನಗೆ ಇರುವ ಅಲ್ಪ ಸ್ವಲ್ಪ ಇತಿಹಾಸದ ಜ್ಞಾನದಲ್ಲಿ ಹೇಳುವದಾದ್ರೆ ಟಿಪ್ಪು ಕನ್ನಡ ವಿರೋಧಿಯೋ ಅಲ್ವೋ ಆತ ಬ್ರಿಟಿಷ್ ವಿರೋಧಿ ಆಗಿದ್ದ ಇನ್ನು ಶಿವಾಜಿ ಯನ್ನು ರಾಷ್ಟ್ರ ಭಕ್ತ ಮಾಡುವ ಮಂದಿಗೆ ಶಿವಾಜಿ ನಮ್ಮ ನಾಡ ಮೇಲೆ ದಂಡು ಎತ್ತಿ ಬಂದು ನಮ್ಮ ವಿರೋಧಿ ಆಗಿದ್ದ ಅನ್ನೋದೂ ನೆನಪಿರಲಿ. ಇಲ್ಲಿ ನಾನೇನು ಶಿವಾಜಿ ಯನ್ನು ಕಾರಣವಿಲ್ಲದೇ ಎಳದು ತಂದಿಲ್ಲ . 
ಶಿವಾಜಿ ಟಿಪ್ಪು ಎಲ್ಲಾ ಭೂತ ಕಾಲದವರು. ಆದ್ರೆ M.E .S ಮತ್ತು ಶಿವ ಸೇನೆ ವರ್ತಮಾನದವರು.
ನಮ್ಮ ಕನ್ನಡ ನಾಡಿಗೆ ಈಗ ಮಾರಕವಾಗಿರೋದು ಟಿಪ್ಪು ಅಲ್ಲಾ  ಶಿವಾಜಿ ನು ಅಲ್ಲಾ , ಆದರೆ ಖಂಡಿತ ಮಾರಕವಾಗಿರೋದು ಬೆಳಗಾವಿಯ ಶಿವಾಜಿ ಭಕ್ತರು , ಕನ್ನಡ ಮತ್ತು ಕಾವೇರಿ ವಿಚಾರದಲ್ಲಿ ತುಟಿ ಬಿಛಡ್ಡಾ ಭಾಜಪ ನಾಯಕೆರೆಲ್ಲ ಟಿಪ್ಪು ಜಯಂತಿ ಹೆಸರಿನಲ್ಲಿ ಬೀದಿಗೆ ಇಳಿಯುವುದು ಕಂಡ್ರೆ ಮರುಕ ಹುಟ್ಟುತದೆ, ಇವ್ರಿಗೆ ಟಿಪ್ಪು ಕನ್ನಡ ಅಭಿಮಾನ ಕಲಿಸಿ ಕೊಟ್ಟ ಅನ್ನೋ ಕಾರಣ್ಕದ್ರು ನಾವು ಟಿಪ್ಪು ಜಯಂತಿ ಆಚರಿಸಬೇಕು.
ಗಡಿಯಲ್ಲಿ ಕನ್ನಡ ಶಾಲೆಯನ್ನು ಸುಟ್ಟು ಹಾಕುವ ಮಂದಿ ಜೊತೆ ಹರ ಹರಾ ಮಹದೇವ್ ಅಂತಾ ಪೋಸು ಕೊಡುವ ಮಂದಿಗೆ ಇರುವುದು ಸ್ವ ಹಿತಾಸಕ್ತಿ ವಿನ್ಹಾ ಕನ್ನಡದ ಅಭಿಮಾನವಲ್ಲ .
ನಾವು ಭೂತ ಕಾಲದಲ್ಲಿ ಬದುಕುವುದನ್ನು ಬಿಟ್ಟು ವರ್ತಮಾನದಲ್ಲಿ ಕನ್ನಡ ವನ್ನು ಉಳಿಸಿ ಕೊಂಡ್ರೆ ಕನ್ನಡ ನಾಡು ವಜ್ರ ಮಹೋತ್ಸವ ಆಚರಿಸಿ ಕೊಂಡಿದಕ್ಕೂ ಸಾರ್ಥಕ ವಾಗುತ್ತದೆ.    

No comments: