Saturday, 1 August 2015

Friendship & Social Being a Debate on Friendship week


Dear Friends, Socialism will persistently exist in Autocracy, Communist, Democratic society because Friendship relationships is the foundation for Socialism whereas Capitalism has its roots in Economy and Profiteering. The following piece of write up was written by me as part of Debate series on Socialism Vs Capitalism, read and enjoy as it has a humor touch in narration....... 


ನಿರ್ಮಲ Friendship ಎಂಬ ಸಮಾಜವಾದ ಮತ್ತು ಕೊಳಕು ಮನಸಿನ ‘Bucket’ ವಾದ
             “Everyone is insane in this world; exceptional ones have ‘AUTO Rickshaw-meter’ to accept it, while Majority needs ‘THERMO-meter’ on listening to it.”    By Radio Jockey- Pradeep from Radio City Kannada

ಗಾಳಿಯನ್ನು ನೋಡಿದ್ದೀರಾ? ನೀರಿನ ರುಚಿ ಏನು ಎಂದು ಹೇಳಬಲ್ಲಿರಾ? ಬೆಂಕಿ ಕೆಟ್ಟದೋ? ಒಳ್ಳೆಯೆದೋ? ಎಂದು ಸ್ಪಷ್ಟವಾಗಿ ಹೇಳಬಲ್ಲಿರಾ? ಹೋಗಲಿ ದೇವರನ್ನು ಕರತಂದು ಎಲ್ಲರಿಗೂ ಪರಿಚಯ ಮಾಡಬಲ್ಲಿರಾ? ಉತ್ತರ ಮಬ್ಬು, ಮಬ್ಬು ಅಗಿದ್ದ್ಯಾ? ಹಾಗಂತ  ಇವು ಯಾವುದು ಇಲ್ಲ ಅನ್ನೋಕೆ ನಿಮ್ಮ ಬಳಿ ಸಾಕ್ಷಿ ಇದೆಯಾ? ಇಲ್ವಾ?! ಅದೇ, ಸ್ವಾಮಿ ಈ ಜಗತ್ತಿನ್ನಲ್ಲಿ ಕೆಲವು intangible (ಅಗೋಚರ) ಸತ್ಯವಿದೆ, ಅಂತಹ ಒಂದು ಸತ್ಯ್ವೇ , ‘ಸಮಾಜವಾದ ಉರುಫ್ ‘Socialism’.

‘Socialism’, ಅನ್ನು ದೇಶದ ಅತೃಪ್ತ ಆತ್ಮಗಳೇ ತುಂಬಿರುವ ಪಾರ್ಲಿಮೆಂಟ್, ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಗಳಲ್ಲೀ ಹುಡುಕಿ ಸುಸ್ತಾಗಿ, ‘Socialism’ ಅನ್ನೋದು ಒಂದು ಪುಂಗೂ’-ಪದ (false). ನನ್ನದು ಎಂತಹ ಅದ್ಭುತವಾದ  ಸಂಶೋಧನೆ,  Eurekha, Eurekha  ಅನ್ನುತ್ತ, ತಮ್ಮ Bath tub ನಿಂದ laptop ಕಡೆಗೆ ನುಗ್ಗಿದ, ‘ವಾರಕ್ಕೆ ಎರಡು ಅಂಕಣ ಬರೆಯುವಏಕೈಕ ಸಂಪಾದಕರೊಬ್ಬರ, ಕುರಿತು 24X 7 ಗಳು Breathless ಆಗಿ Breaking-ನ್ಯೂಸ್ ಪ್ರಕಟ ಮಾಡುತ್ತಿರುವದು ಈ ವಾರದ ವಿಶೇಷ .  ‘Breaking- News’, ಎಂಬುದು, pure ಕನ್ನಡ ಪದವೇ, ಅಲ್ವೇ? ಅನ್ನೋದನ್ನ ನಮ್ಮ ಶುದ್ಧ-ಕನ್ನಡಬಳಗದವರು ಬೇಗ ನಿರ್ಧಾರ ಮಾಡಿದರೆ ಒಳ್ಳೆಯದು?
ಈ ವಿಚಾರಕ್ಕೆ ನಂತರ ಬರೋಣಆದರೆ, ಈ ವಾರ ‘Friendship week’, ನಮ್ಮ ಯುವಜನತೆಗೆ, ತಮ್ಮ ಸ್ನೇಹದ ಬೆಸುಗೆ ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ವಾರ.ಸ್ನೇಹ-ಪ್ರೀತಿಎಂಬ ಭಾವನೆ, ನಮ್ಮಲ್ಲಿ ಹೇಗೆ ಅರಿವಿಲ್ಲದಂತೆ, ಸಮಾಜವಾದವನ್ನು ಬಿತ್ತಿ-ನೀರೇರದು ಪೋಷಿಸುತ್ತದೆ ಎಂದು ನಿಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನ ಇಲ್ಲಿದೆ, ಫ್ರೆಂಡ್ಸ್............         

ಸ್ನೇಹ-ಪ್ರೀತಿ ಮತ್ತು Socialism

ನಮಗೆ ಸ್ಕೂಲ್ ನಲ್ಲಿ ‘Human is a Social Being’ ಅಂತ ನಮ್ಮ Social studies ಟೀಚರ್ ಉರು ಹಚ್ಚಿಸಿದ್ದು ನೆನಪಿದೆ ಅಲ್ವೇ? ಅವರು, ಎಂದಾದ್ರೂ ‘Human is a Capitalist’ ಅಂತ by-heart ಮಾಡಿಸ್ಸಿದ್ದು ನೆನಪಿದ್ಯಾ? ಹೀಗಿರುವಾಗ ಸಮಾಜವಾದ ಅನ್ನೋದೂ ಪುಂಗು-ಪದ ಅನ್ನೋಕ್ಕೆ ಯಾವ ಆಧಾರವಿದೆ?
Socilasim ಅನ್ನು Karl-Marx ಗೆ Restrict ಮಾಡೋದು ಬೇಡ ಗುರುಗಳೇ, ಅದು ನಮ್ಮ ಪುರಾಣ ಕಾಲದಿಂದ ಇಂದಿನ ಕಲಿಯುಗದವರೆಗೂ ಜನರ ಜೀವ-ನಾಡಿಯಾಗಿ ಸ್ನೇಹ-ಪ್ರೀತಿಎಂಬ ಜೋಡಿ ಪದಗಳ ಮೂಲಕ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಮುಂದೆಯು ಉಳಿಸಿಕೊಳ್ಳಲಿದೆ, ಸಂಶಯ ಬೇಡ ಗುರುಗಳೇ.         
ಸ್ನೇಹಕ್ಕೆ, ಕರ್ಣ-ಸುಯೋಧನ, ಕೃಷ್ಣ-ಕುಚೇಲ, ರಾಮ-ಸುಗ್ರೀವ, ಕೃಷ್ಣ –ಜಂಬೂವಂತ ಎಂಬ ಜೋಡಿ-ಪದಗಳು, ನಮಗೆ ಮಾದರಿ ಅಲ್ವೇ? ಅಂದು ಕೃಷ್ಣ –ಜಾಂಬೂವಂತರ ಸ್ನೇಹ, ಕೃಷ್ಣ-ಜಾಂಬವತಿ ಪ್ರೀತಿಗೇ ದಾರಿ ತೋರಿತಲ್ವೆ, ಇಂದು ಗವಾಸ್ಕರ್-ವಿಶ್ವನಾಥ್ ಸ್ನೇಹ ಅವರನ್ನು ಭಾವ-ಭಾಮೈದ ಎಂಬ ಭಲೇ ಜೋಡಿ ಮಾಡಿಲ್ವೆ?  ನಾದ ಬ್ರಹ್ಮ ಹಂಸಲೇಖಲೋಕದ ಸೃಷ್ಟಿಗೆ ಪ್ರೀತಿ ಕಾರಣಎಂಬ ಸತ್ಯವನ್ನು Adam-Eve ಎಂಬ ಜೋಡಿ-ಪದದ ಮೂಲಕ ಉಲ್ಲೇಖ ಮಾಡಿಲ್ವೆ? American-Dollar, Dhubai-Dinar, Europe-Euro ಎಂಬ ಬಲಿಷ್ಠ capitalist-ಗುರುತುಗಳಿಂದ ಅಥವಾ ನಮ್ಮ ಪ್ರೀತಿಯ RBI-Rupees ಎಂಬ ಬಡಪಾಯಿ capital ನಿಂದ ಜಗತ್ತಿನ ಸೃಷ್ಟಿಯಾಗಿದೆ ಅಂತ ಎಲ್ಲಾದ್ರೂ ಉಲ್ಲೇಖವಾಗಿದ್ಯಾ ಗುರುಗಳೇ? ಹೌದು ಜಗತ್ತಿನ ಸೃಷ್ಟಿ ಸ್ನೇಹ-ಪ್ರೀತಿಯಿಂದಆದರೆ ಅದನ್ನು ನಿಭಾಯಿಸುವ ಸಲುವಾಗಿ ಕ್ಯಾಪಿಟಲ್ನ ಅಗತ್ಯ ಇದೆ, ಅದು ಎಷ್ಟರ ಮಟ್ಟಿಗೆ ಅನ್ನೋದರ ಮೇಲೆ ನೀವು ಸಹಜ-ಸ್ನೇಹ-ಜೀವಿಯೋ ಅಥವಾ Fresh ತರಕಾರಿ ಮಾರೋದೂ ನಾನೇ, Digital ವಸ್ತುಗಳು ನನ್ನ ಟ್ರೆಂಡ್ಸ್ ನಲ್ಲಿಯೇ ಬಿಕ್ರಿ ಆಗಬೇಕು, ದೇಶದಲ್ಲಿ SBI ನಂತಹ ಸ್ನೇಹ-ಹೃದಯಾದ ಬ್ಯಾಂಕ್ ಇದ್ದೂ, ನನ್ನದೇ ಒಂದು ಬ್ಯಾಂಕ್ ಬೇಕೂ, ನನ್ನದೇ ಆದ Oil ಉದ್ಯಮ ಇರಬೇಕುನನ್ನದೇ Radio ಚಾನಲ್, ನನ್ನದೇ TV ಚಾನೆಲ್, ನನ್ನ್ದೆ 4ಜಿ Mobile….  ..............ಎಲ್ಲವೂ  ನನ್ನವೇ, ಜೊತೆಗೆ ನಾನು ನನ್ನ ಹೆಂಡ್ರು ಮಕ್ಕಳು ಇರಲು ಯಾರಿಗೂ ಇಲ್ಲದ ಬಹುಮಹಡಿ ಕಟ್ಟಡ್ವೇ ಬೇಕೂ! ಇದು ‘Capitalism’ ನಲ್ಲಿನ ಸ್ವಾರ್ಥದ ಕಹಿ ಸತ್ಯ. ಆದರೆ ತನ್ನ ಪತ್ನಿಯ ಒಡವೆ ಎಂಬ ‘capital’ ಬಳಸಿ ಸಹೃದಯ ಸ್ನೇಹಿತರ ಜೊತೆ ತನ್ನ ಕನಸು ಹಂಚಿ ಕೊಂಡು ದೇಶದ ಇತಿಹಾಸದಲ್ಲಿ ಮಾಲೀಕನ capital ನಲ್ಲಿ ಕಾರ್ಮಿಕನ ಹಕ್ಕು ಇದೆ ಎಂದು (ESOP) ಮೂಲಕ ತೋರಿದ ನಮ್ಮ ಕನ್ನಡಿಗ INFOSYS ನಾರಾಯಣಮೂರ್ತಿ, ನಿಜವಾದ ಉದ್ಯಮಿ, ಅವರು ದುಡ್ಡು ಇದ್ದ ಕಡೆ ಎಲ್ಲಾ ಅಂಗಡಿ ತೆರಯುವ ಚಿಲ್ಲರೆ ವ್ಯಾಪಾರಿ ಅಲ್ಲಾ. ತಾವು ನಿಪುಣತೆ ಸಾಧಿಸಿರುವ ಕ್ಷೇತ್ರಕ್ಕೆ ತಮ್ಮ ಉದ್ಯಮವನ್ನು-ಮತ್ತು ಆಕಾಂಕ್ಷೆಗಳನ್ನು ಸೀಮಿತ ಗೊಳಸಿಕೊಂಡಿದ್ದಾರೆ. ಇದು ನಿಜವಾದ ‘Capitalism’ ಒಳಗಿನ ‘Socialism’ ಪ್ರಿಯ ಸಂಪಾದಕರೆ.  ಇಂದು ಶಿಕ್ಷಣ ವ್ಯಾಪಕವಾಗಿ ವ್ಯಾಪಾರಿಕರಣವಾಗಿದೆ ಎಂಬ ಕೂಗು ಇರುವಾಗ, ನಮ್ಮ ರಾಜ್ಯದ ಬಹುತೇಕ ಇಂಜಿನೀರಿಂಗ್ ಮತ್ತು ಮೆಡಿಕಲ್ ಕಾಲೇಜ್ ಗಳು capitalistಗಳ ಕಪಿಮುಷ್ಟಿಯಲ್ಲಿ ಬಂಧಿತವಾಗಿರುವಾಗ, ಬೆಂಗಳೂರಿನ ಹೊರವಲಯದ, ದೊಡ್ಡಬಳ್ಳಾಪುರ ರಸ್ತೆಯ, ರಾಜನೂಕುಂಟೆಯಲ್ಲಿ, ಶಿಕ್ಷಕ ಮಿತ್ರರು, ತಮ್ಮ ಶಿಕ್ಷಣ ಕ್ಷೇತ್ರದಲ್ಲಿನ ದುಡಿಮೆಯ Capital ನಿಂದ ಕೆರೆಯ ನೀರನ್ನು ಕೆರೆಗೆ ಚೆಲ್ಲುವಸಿದ್ಧಾಂತದ ಪ್ರಕಾರ ಸ್ಥಾಪಿಸಿರುವ ‘Shri. Sai Vidya Institute of Technology’, ಎಂಬ ಶಿಕ್ಷಕ ಮಿತ್ರರ ಸಂಸ್ಥೆ, ನಿಜವಾಗಿಯು, Socialismನ ಧ್ಯೋತಕ. ಅದೇ, ಆ ವಿದ್ಯಾಸಂಸ್ಥೆಗೆ ಹೋಗುವ ಮಾರ್ಗದ ಉದ್ದಕ್ಕೂ, ರಾರಾಜಿಸುತ್ತಿರುವ ಜನಪ್ರತಿನಿಧಿ ಒಬ್ಬರ (ಅದೂ,simplicity ಬೋಧನೆ ಮಾಡುವ ಪ್ರಧಾನ ಮಂತ್ರಿ ಯವರ ಪಕ್ಷದ ಪ್ರತಿನಿಧಿ!) ಜನ್ಮ-ದಿನದ ಶುಭಾಶಯ ಕೋರುವ Flex-ಬ್ಯಾನರ್ ಗಳು, ನಮ್ಮ  ಹಾಲಿ ಪ್ರಧಾನ ಮಂತ್ರಿ ಯವರಿಗೆ, ಮಾಜಿ ಪ್ರಧಾನಿ Dr. ಮನಮೋಹನ್ ಸಿಂಗ್ ರವರಿಗಿಂತ ತಮ್ಮ ಕಾರ್ಯಕರ್ತರ ಮೇಲೆ ಹೆಚ್ಚು ಹಿಡಿತ ಇದೆಯಾ? ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಯ ಬ್ಯಾನರನ್ನು ಕಣ್ಣ ಮುಂದೆ ತರುತ್ತದೆ.


ನನ್ನ ಕಳೆದ ಒಂದು ವಾರದ ಅನುಭವದಲ್ಲಿಯೇ, ಹೇಳಬೇಕಂದ್ರೆ, ‘Socialism’ ನಮ್ಮ ನಡುವೆ ಹಾಸುಹೊಕ್ಕಾಗಿದೆ. ಕಾರ್-pooling ಮಾಡಲು ನಾನು ಹೋಗುವ ಮಾರ್ಗದಲ್ಲಿ ನನ್ನ ಯಾವ ಸಹೊದ್ಯೋಗಿಯು ಇಲ್ಲವಾದ ಕಾರಣ, ಒಬ್ಬನೇ ಕಾರ್ನಲ್ಲಿ ಹೊರಟೆ, ದಾರಿಯಲ್ಲಿ  ಒಬ್ಬ ಶಾಲಾ ಬಾಲಕ Drop ಕೇಳಿದ, ಸರಿ ಜೊತೆಗೆ ಒಬ್ಬ ಮಾತಿಗೆ ಸಿಕ್ಕ ಎನ್ನುತ್ತಾ ಅವನ ಜೊತೆ ಪಯಣ  ಮುಂದುವರಿಸಿದೆ, of course FM radio ದಲ್ಲಿನ ಸ್ನೇಹಿತರ ಜೊತೆ default ಆಗಿ ಇದ್ದೇ ಇರುತ್ತೆ ಅನ್ನಿ. ಮನದಲ್ಲಿ, ಇದರಿಂದ, ಒಬ್ಬನ ಸಲುವಾಗಿ ನಾಲ್ಕು-ಚಕ್ರ ವಾಹನದ Petrol ವ್ಯಯ ಮಾಡುತ್ತಿದ್ದಿನಿ ಎಂಬ ಭಾವನೆ ಸ್ವಲ್ಪ ಕಮ್ಮಿ ಆಯಿತು. ನಾನು ನಿಜವಾದ Socialist ಅಂತ ನನ್ನ ಮನಸು ಬೀಗ ತೊಡಗಿತು. ದಾರಿ ಮಧ್ಯದಲ್ಲಿ  ವಯೋವೃದ್ಧ ವ್ಯಕ್ತಿ ಒಬ್ಬರು ಕುಂಕುಮ-ವಿಭೂತಿ ಧರಿಸಿ, ಸಹಾಯ ಬೇಡುತಿದ್ದರು, ನನ್ನ ಮುಂದೆ ಇದ್ದ Ford-Ikon ಕಾರಿನಿಂದ ಹೊರ ಬಂದ ಕೈ ಒಂದು ೧೦ ರೂಪಾಯಿ ನೋಟನ್ನು ಆ ವೃದ್ಧ-ಜೀವಿಯ ಕೈಗೆ ನೀಡಿತು, ನಾನು ಸಹ ೨ ರೂಪಾಯಿ (ನನ್ನ ಶಕ್ತಿ-ಅನುಸಾರ) ಅವರ ಕೈಗೆ ಇಟ್ಟೆ. Socialism ನ ಬೇರು ಮತ್ತು ಮರಗಳು ನಮ್ಮಲ್ಲಿ ಬಹಳ ಗಟ್ಟಿಯಾಗಿ ಇವೆ ಅನ್ನೋದು ಖಾತ್ರಿ ಆಯಿತು. ಕಳೆದ ವಾರದಲ್ಲಿ  ಒಬ್ಬ West-ಬೆಂಗಾಲ್ ನ ಸೆಕ್ಯೂರಿಟೀ –manager, ಮೂರು ನೇಪಾಲಿ ಮಕ್ಕಳಿಗೆ, ನನ್ನ ಬೈಕ್ ಮತ್ತು ಕಾರ್ನಲ್ಲಿ ಡ್ರಾಪ್ ನೀಡಿದ ತೃಪ್ತಿ ನನಗೆ ಇದೆ. ಖ್ಯಾತ, ವಿಮರ್ಶಕ ಡಿ.ಆರ್ . ನಾಗರಾಜ್ ರವರ ಕುರಿತ ಪುಸ್ತಕಇಂತಿ ನಮಸ್ಕಾರಗಳು’, ಓದುವಾಗ ಕಣ್ಣಿಗೆ ಬಿದ್ದ ಒಂದು interesting ಸಂಗತಿ, ಡಿ.ಆರ್ . ನಾಗರಾಜ್ ರವರು ತಮ್ಮ careerನ ಆರಂಭದ ದಿನಗಳಲ್ಲಿ ಪ್ರಜಾವಾಣಿ Socialist ಸಿದ್ಧಾಂತ ಪ್ರತಿಪಾದಕರಾದ ಸಂಪಾದಕರು, ತಮ್ಮ ಖಾಸಗಿ ಗ್ರಂಥಾಲಯದಲ್ಲಿ ಇದ್ದ ದುಬಾರಿ ಪುಸ್ತಕಗಳನ್ನು  ನೀಡಿ ತಮಗೆ  ಮಾರ್ಗದರ್ಶನ ಮಾಡಿದರು ಎಂಬ ವಿಚಾರ ಓದಿದಾಗ,  ನನಗೆ ಅನ್ನಿಸಿದ್ದು, ಬಹಳಷ್ಟು Socialist ಗಳು ಆಚರಣೆಯಲ್ಲೂ ಸಮಾಜಮುಖಿ ಯಾಗಿ ಇರುತ್ತಾರೆ ಅನ್ನೋ ಸ್ಪಷ್ಟತೆ ದೊರಕಿತು.                  
ಇದು, friendship-week, ಕಾಲೇಜ್ ಕ್ಯಾಂಪಸ್ನಲ್ಲಿ Yellow Roses ತಮ್ಮ ಆಧಿಪತ್ಯ ಸಾಧಿಸುವ ವಾರ. ನಾನು Friendshipನ ಎಲ್ಲಾ ಆಯಾಮ ಬಲ್ಲ ಮಹಾನ್ ಸ್ನೇಹ-ಗುರು ಎಂಬ ಅಹಂ ನನ್ನಲ್ಲಿ ಬಹಳ ದಿನದಿಂದ ಮನೆ ಮಾಡಿತ್ತು. ಆದರೆ, ನನ್ನ Friendship ವ್ಯಾಖ್ಯಾನ pre-globalization ಕಾಲದ, ಸ್ವಲ್ಪ ಮಟ್ಟಿನ outdated ಜ್ಞಾನ, ಅಂತ ಕನ್ನಡದ ಹೊಸ ತಲೆಮಾರಿನ ಸಿಂಪಲ್-ಸುನಿ ಎಂಬ Director ನೀಡಿರುವ ಬಹುಪರಾಕಎಂಬ ಸಿನೆಮಾ ತೋರಿಸಿ ಕೊಟ್ಟಿತು. ನನ್ನ ಪ್ರಕಾರ ಒಬ್ಬ ಹುಡಗ-ಹುಡುಗಿ, ಸ್ನೇಹಿತರಾಗಿ ಮಾತ್ರ ಇರಲು ಸಾಧ್ಯವಿಲ್ಲ, ಅವರು ಬಹಳ ನಿಕಟವಾದ ವರ್ತನೆ ತೋರುತಿದ್ದಾರೆ ಅಂದರೆ ಅವರು ‘Love-ಬರ್ಡ್ಸ್’, ಆಗಿರಲೇಬೇಕು. ಇದು ನನ್ನ ಕಾಲದ College ವಿದ್ಯಾರ್ಥಿಗಳ ಮನಸ್ಥಿತಿ. ಆದರೆ, ಸುನಿ ತಮ್ಮ, ಸಿನೆಮಾದಲ್ಲಿ ಇಂದಿನ generation ಸ್ನೇಹ-ಪ್ರೀತಿ ನೋಡೋ ಬಗೆಯನ್ನು ಬಹಳ ಮನೋಜ್ಞವಾಗಿ ಮೂಡಿಸಿದ್ದಾರೆ. ಈ ಬಾರಿಯ friendship day,  ನನಗೆ ಹೊಸ Work-place ನಲ್ಲಿ ಹೊಸ , ಹೊಸ ಫ್ರೆಂಡ್ಸ್ ಗಳನ್ನು ನೀಡಿದೆ, ಪುನೀತ್ ರಾಜ್ಕುಮಾರ್, ಈಗ ನನ್ನ FB ಸಹಪಾಠಿ, ಬಹಳಷ್ಟು ರೇಡಿಯೊ Jockey ಗಳು ನನ್ನ ಜೊತೆ ಮೌನ ಸಂಭಾಷಣೆ ನೆಡೆಸುವ ಸ್ನೇಹಿತರಾಗಿದ್ದಾರೆ, ನನ್ನ ಹಿಂದಿನ ಕಾಲೇಜ್ ನಲ್ಲಿನ, ಅನೇಕ ಸ್ಟೂಡೆಂಟ್ಸ್ ಇಂದು ನನ್ನ ಸ್ನೇಹಿತರು. ಇವರೊಡನೆ ನನ್ನ Old is Gold ಎಂಬ buddy ಗಳು ಸದಾ ಇದ್ದೇ ಇದ್ದಾರೆ.  ಜೀವನದಲ್ಲಿ ಎಷ್ಟು ಪೇಪರ್-Capital’  ಸಂಪಾದನೆ ಮಾಡಿದ್ವಿ, ಅನ್ನುವುದಕ್ಕಿಂತ ನಮ್ಮ ಸಹಾಯಕ್ಕೆ  ಎದೆ ಒಡ್ಡಿ ನಿಲ್ಲಬಲ್ಲ ‘Human-capital’ ಸಂಪಾದನೆ ಎಷ್ಟು ಮಾಡಿದ್ದೀವಿ ಅನ್ನೋದು ನನಗೆ ಮುಖ್ಯ.   ಇದೆ  ನನ್ನ  ಪ್ರಕಾರ ‘Socialism’ ಮತ್ತು ಇದು ಶಾಶ್ವತ ಸಹ.         
Happy Friendship week
 
   



No comments: